Psalms 122
ಯಾತ್ರಿಕರು ಯೆರೂಸಲೇಮನ್ನು ಸ್ಮರಿಸುವುದು
ಯಾತ್ರಾಗೀತೆ; ದಾವೀದನ ಕೀರ್ತನೆ.
1<<ಯೆಹೋವನ ಮಂದಿರಕ್ಕೆ ಹೋಗೋಣ ಬಾ!>>ಎಂದು ಜನರು ನನ್ನನ್ನು ಕರೆದಾಗ ನನಗೆ ಸಂತೋಷವಾಯಿತು.
2 ಯೆರೂಸಲೇಮೇ! ನಮ್ಮ ಕಾಲುಗಳು,
ನಿನ್ನ ಬಾಗಿಲುಗಳಲ್ಲಿ ಸೇರಿರುತ್ತವಲ್ಲಾ.
3 ಯೆರೂಸಲೇಮೇ! ನೀನು ಸರಿಯಾದ ಹೊಂದಿಕೆಯಿಂದ,
ಕಟ್ಟಲ್ಪಟ್ಟ ನಗರವಾಗಿದ್ದಿ.
4 ಕುಲಗಳು ಅಂದರೆ ಯೆಹೋವನ ಕುಲದವರು, ಯೆಹೋವನ ನಾಮದ ಕೀರ್ತನೆಗೋಸ್ಕರ,
ಇಲ್ಲಿಗೆ ಯಾತ್ರೆ ಮಾಡುತ್ತಿದ್ದರು.
ಇದು ಇಸ್ರಾಯೇಲರಲ್ಲಿದ್ದ ಕಟ್ಟಳೆಯಷ್ಟೆ.
5 ನ್ಯಾಯಪೀಠಗಳಾಗಿರುವ ದಾವೀದನ ಮನೆತನದವರ,
ಸಿಂಹಾಸನಗಳು ಇಲ್ಲಿಯೇ ಇದ್ದವಲ್ಲಾ.
6 ಯೆರೂಸಲೇಮಿನ ಸಮಾಧಾನಕ್ಕಾಗಿ ಪ್ರಾರ್ಥಿಸಿರಿ. <<ಯೆರೂಸಲೇಮೇ, ನಿನ್ನನ್ನು ಪ್ರೀತಿಸುವವರಿಗೆ ಸೌಭಾಗ್ಯವುಂಟಾಗಲಿ.
7 ನಿನ್ನ ಪೌಳಿಗೋಡೆಗಳೊಳಗೆ ಶುಭವುಂಟಾಗಲಿ;
ನಿನ್ನ ಅರಮನೆಗಳಲ್ಲಿ ಸೌಭಾಗ್ಯವಿರಲಿ.>>
8 ನನ್ನ ಬಂಧುಮಿತ್ರರ ನಿಮಿತ್ತವಾಗಿ, <<ನಿನಗೆ ಸಮಾಧಾನವಾಗಲಿ>> ಎಂದು ಹೇಳುತ್ತೇನೆ.
9 ನಮ್ಮ ದೇವರಾದ ಯೆಹೋವನ ಮಂದಿರದ ನಿಮಿತ್ತವಾಗಿ,
ನಿನಗೆ ಸುಕ್ಷೇಮವನ್ನು ಹಾರೈಸುತ್ತೇನೆ.
Copyright information for
KanULB