Psalms 125
ಯೆಹೋವನೇ ವಿಶ್ವಾಸಿಗಳ ಆಶ್ರಯ
ಯಾತ್ರಾಗೀತೆ.
1ಯೆಹೋವನಲ್ಲಿ ಭರವಸೆ ಇಡುವವರು,ಚೀಯೋನ್ ಪರ್ವತದ ಹಾಗೆ ಇದ್ದಾರೆ;
ಅದು ಕದಲುವುದಿಲ್ಲ, ಸದಾ ಸ್ಥಿರವಾಗಿರುತ್ತದೆ.
2 ಪರ್ವತಗಳು ಯೆರೂಸಲೇಮಿನ ಸುತ್ತಲೂ ಹೇಗೋ ಹಾಗೆಯೇ,
ಯೆಹೋವನು ಈಗಿನಿಂದ ಸದಾಕಾಲವೂ ತನ್ನ ಜನರ ಸುತ್ತಲೂ ಇರುವನು.
3 ದುಷ್ಟರ ದಂಡಾಧಿಕಾರವು ನೀತಿವಂತರ ಸ್ವಾಸ್ತ್ಯದಲ್ಲಿ ಉಳಿಯುವುದೇ ಇಲ್ಲ;
ಉಳಿದರೆ ನೀತಿವಂತರೂ ಅಕ್ರಮಕ್ಕೆ ಕೈ ಹಾಕಬಹುದು.
4 ಯೆಹೋವನೇ, ಒಳ್ಳೆಯವರೂ, ಯಥಾರ್ಥಚಿತ್ತರೂ, ಆಗಿರುವವರಿಗೆ ಉಪಕಾರಮಾಡು.
5 ಯೆಹೋವನು ಡೊಂಕುದಾರಿ ಹಿಡಿದವರನ್ನು,
ಪಾತಕಿಗಳು ಹೋಗುವ ಸ್ತಳಕ್ಕೆ ನಡೆಸುವನು.
ಇಸ್ರಾಯೇಲರಿಗೆ ಶುಭವುಂಟಾಗಲಿ.
Copyright information for
KanULB