Psalms 87
ಚೀಯೋನೇ ಎಲ್ಲಾ ದೇವಜನರ ಮಾತೃಭೂಮಿ
ಕೋರಹೀಯರ ಕೀರ್ತನೆ; ಗೀತ.
(ಯೆಶಾ. 2:2-4; 19:19-24)
1ಯೆಹೋವನು ಸ್ಥಾಪಿಸಿದ ಪಟ್ಟಣವುಪರಿಶುದ್ಧ ಪರ್ವತದ ಮೇಲಿದೆ.
2 ಆತನು ಯಾಕೋಬ್ ವಂಶದವರ ಎಲ್ಲಾ ನಿವಾಸಗಳಿಗಿಂತ,
ಚೀಯೋನಿನ ದ್ವಾರಗಳನ್ನು ಹೆಚ್ಚಾಗಿ ಪ್ರೀತಿಸುತ್ತಾನೆ.
3 ದೇವನಗರವೇ, ನಿನ್ನ ವಿಷಯವಾದ ಗೌರವೋಕ್ತಿಯೇನೆಂದರೆ,
4 <<ಐಗುಪ್ತ, ಬಾಬೆಲ್ ದೇಶಗಳವರನ್ನು, ನನ್ನನ್ನು ಬಲ್ಲವರಲ್ಲಿ ಎಣಿಸುವೆನು. ಇಗೋ ಫಿಲಿಷ್ಟಿಯ, ತೂರ್, ಕೂಷ್, ಜನಾಂಗಗಳು ಅಲ್ಲೇ ಹುಟ್ಟಿದವು>> ಎಂಬುದೇ.
5 ಇದರಿಂದ ಚೀಯೋನೇ ಪ್ರತಿಯೊಂದು ಜನಾಂಗದ ಜನ್ಮನಗರವೆಂದು ಹೇಳಲ್ಪಡುವುದು; ಅದನ್ನು ಪರಾತ್ಪರನು ತಾನೇ ಸ್ಥಿರಪಡಿಸುವನು.
6 ಯೆಹೋವನು ಜನಾಂಗಗಳ ಪಟ್ಟಿಯನ್ನು ಮಾಡುವಾಗ,
<<ಪ್ರತಿಯೊಂದರ ವಿಷಯ ಇದು ಅಲ್ಲಿಯೇ ಹುಟ್ಟಿದ್ದು>> ಎಂದು ಬರೆಯುವನು.
ಸೆಲಾ
7 ಇವರು ಹಾಡುತ್ತಾ, ಕುಣಿಯುತ್ತಾ, <<ನನ್ನ ಜೀವಜಲದ ಒರತೆಗಳೆಲ್ಲಾ ನಿನ್ನಲ್ಲಿಯೇ ಇವೆ>> ಎಂದು ಹೇಳುವರು.
Copyright information for
KanULB